INFORMATION
ಕರಾವಳಿ ಮರಾಟಿ ಸಮಾವೇಶ 2024ರಲ್ಲಿ ನಡೆದ ವಿಷಯದ ಬಗ್ಗೆ ಮಾಹಿತಿ.
ಕರಾವಳಿ ಮರಾಟಿ ಸಮಾವೇಶ - 10 ನವೆಂಬರ್ 2024
KARAVALI MARATI SAMAVEHSHA - 2024
ಶ್ರೀ H. ರಾಜೇಶ್ ಪ್ರಸಾದ್ IAS
ಅಧ್ಯಕ್ಷರು, ಕರಾವಳಿ ಮರಾಟಿ ಸಮಾವೇಶ 2024
ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಅಧ್ಯ ಕ್ಷರ ಮಾತುಗಳು
22 ವರ್ಷಗಳ ನಂತರ ಇಂತಹ ಒಂದು ಅದ್ದೂರಿಯಾಗಿ, ವಿಜೃಂಬನೆಯಿಂದ ಸುಮಾರು 15000 ಜನಕ್ಕಿಂತಲೂ ಹೆಚ್ಚಿನ ಜನರು ಈ ಸಮಾವೇಶದಲ್ಲಿ ಭಾಗವಹಿಸಿ ಒಂದು ಐತಿಹಾಸಿಕವಾದಂತಹ ಸಮಾವೇಶವನ್ನ ನಾವೆಲ್ಲರೂ ಒಟ್ಟು ಕೂಡಿ ಆಚರಿಸಿದ್ದೇವೆ ಹಾಗೂ ಈ ಸಮಾವೇಶದ ಏನು ಧೈಯ ಮತ್ತು ಉದ್ದೇಶಗಳು ಇದ್ದವೋ ಅದನ್ನೆಲ್ಲ ಕಾರ್ಯರೂಪಕ್ಕೆ ತರುವಲ್ಲಿ ಸಂಪೂರ್ಣ ಯಶಸ್ಸು ಸಾಧಿಸಿದ್ದೇವೆ ಅಂತ ಹೇಳಲು ತುಂಬಾ ಸಂತೋಷ ಪಡುತ್ತೇನೆ.
ಸಮಾವೇಶ ಕಾರ್ಯಕ್ರಮದ ಪ್ರಕ್ರಿಯೆಯಲ್ಲಿ ಹಿಂದಿನ ನಾಲ್ಕು ಐದು ತಿಂಗಳಲ್ಲಿ ನಾವು ಅದೆಷ್ಟು ಬಾರಿ ನಮ್ಮ ಸಮಾವೇಶದ 33 ಕಮಿಟಿಗಳ ಧುರೀಣರು ಮತ್ತು ನಮ್ಮ ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು,ಪದಾಧಿಕಾರಿಗಳು ಒಂದುಗೂಡಿ ವಿಷಯಗಳನ್ನು ಚರ್ಚಿಸಿರುವುದು ನಮ್ಮಲ್ಲಿನ ಬಾಂಧವ್ಯ ಅನ್ನುವಂತದ್ದು ಅದೆಷ್ಟು ಗಟ್ಟಿಮುಟ್ಟಾಗಿದೆ ಅಭಿವೃದ್ಧಿ ಗೊಂಡಿದೆ ಎನ್ನುವಂತದ್ದು ತುಂಬಾ ಸಂತೋಷಕರವಾದಂತ ವಿಷಯ.
ಈ ಸಮಾವೇಶದಲ್ಲಿ ಸುಮಾರು ಹದಿನೈದು ಸಾವಿರಕ್ಕಿಂತಲೂ ಹೆಚ್ಚಿನ ಜನ ಪಾಲ್ಗೊಂಡಿರೋದು, ಉದ್ಯೋಗ ಮೇಳದಲ್ಲಿ ಸುಮಾರು ಎರಡುವರೆ ಸಾವಿರಕ್ಕಿಂತಲೂ ಹೆಚ್ಚಿನ ಸಮುದಾಯದ ಜನ ಒಟ್ಟುಗೂಡಿ ನಮ್ಮ ಸಮುದಾಯದ ಬಗ್ಗೆ ಚರ್ಚೆ ಮಾಡಿರುವಂಥದ್ದು ನಮ್ಮಲ್ಲಿನ ಸಹೋದರತ್ವದ, ಭ್ರಾತತ್ತ್ವದ, ಒಂದೇ ಕುಟುಂಬ ಅನ್ನುವ ಭಾವನೆ ಮೂಡಿಸಿದ್ದು ಅದೊಂದು ಒಳ್ಳೆಯ ವಿಷಯ, ನಮ್ಮ ಸಮಾಜವನ್ನು ಮುಂದಕ್ಕೆ ಕೊಂಡು ಹೋಗಲು ಪೂರಕವಾದಂತ ವಿಚಾರ ಅಂತ ಭಾವಿಸುತ್ತೇನೆ. ಉದ್ಯೋಗ ಮೇಳದಲ್ಲಿ ಸಿಕ್ಕ ಯಶಸ್ಸು ಇನ್ನೂ ದೊಡ್ಡ ಪ್ರಮಾಣದಲ್ಲಿ. ಇನ್ನು ಹೆಚ್ಚಿನ ಕಂಪನಿಗಳನ್ನು, ಇನ್ನು ಹೆಚ್ಚು ಯುವಕ ಯುವತಿಯರನ್ನು ಕರೆದು ಉದ್ಯೋಗಾವಕಾಶ ಸೌಲಭ್ಯವನ್ನು ಕಲ್ಪಿಸಲು ಸ್ಪೂರ್ತಿದಾಯಕವಾಗಿದೆ.
ಸಮಾವೇಶದಲ್ಲಿ ನಾಲ್ಕು ಪ್ರಮುಖ ವಿಚಾರಗೋಷ್ಠಿಯ ಕಾರ್ಯಕ್ರಮ ಮಾಡಿ ಚರ್ಚೆ ಮಾಡಿದ್ದೇವೆ. ಮೊದಲನೆಯ ವಿಚಾರಗೋಷ್ಠಿಯನ್ನು ಡಾಕ್ಟರ್ ಎಂ ಮೋಹನ್ ಆಳ್ವರವರು ನಡೆಸಿಕೊಟ್ಟಿದ್ದು ವಿದ್ಯಾಭ್ಯಾಸದ ಬಗ್ಗೆ, ನಮ್ಮ ಕೌಶಲ್ಯ ವಿಕಸನದ ಬಗ್ಗೆ, ಉದ್ಯೋಗದ ಬಗ್ಗೆ, ಆರ್ಥಿಕ, ರಾಜಕೀಯ,ಸಾಮಾಜಿಕ ಹಾಗೂ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ತುಂಬಾ ಅಚ್ಚುಕಟ್ಟಾಗಿ ಗೋಷ್ಠಿಯನ್ನು ನಿರ್ವಹಿಸಿದ್ದಾರೆ, ಅದರ ಜೊತೆಗೆ ಆರೋಗ್ಯದ ಬಗ್ಗೆಯೂ ನಮಗೆಲ್ಲರಿಗೂ ಒಳ್ಳೆಯ ಮಾರ್ಗದರ್ಶನ ಮಾಡಿದ್ದಾರೆ. ನಾನು ಅವರ ನಡೆನುಡಿ, ಸಜ್ಜನತೆ ಎಲ್ಲವನ್ನು ಕಂಡು ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನಮ್ಮ ಸಮುದಾಯವು ಅವರು ಕೊಟ್ಟಂತಹ ಸಹಕಾರ ಮಾರ್ಗದರ್ಶನ, ಅವರ ಒಂದು ಉದಾರತೆಗೆ ನಾವೆಲ್ಲರೂ ಚಿರಋಣಿಯಾಗಿದ್ದೇವೆ ಅಂತ ಹೇಳಲು ಇಷ್ಟಪಡುತ್ತಿದ್ದೇನೆ.
ಸಮಾವೇಶಕ್ಕೆ ಹೆಚ್ಚಿನ ಸಹಾಯ ಸಹಕಾರವಿತ್ತ ಶಶಿಧರ ಶೆಟ್ಟಿ ಬರೋಡ ರವರಿಗೂ ನಮ್ಮ ತುಂಬು ಹೃದಯದ ಕೃತಜ್ಞತೆಗಳು ಹಾಗೂ ತನು-ಮನ-ದನದಿಂದ ಸಹಾಯ ಮಾಡಿದ ಮರಾಟಿ ಮತ್ತು ಮರಾಟಿಯೇತರ ಬಾಂಧವರಿಗೂ ನಾವೆಲ್ಲರೂ ಚಿರಋಣಿಯಾಗಿದ್ದೇವೆ.
ನಮ್ಮ ಆಚಾರ ವಿಚಾರ. ಸಂಸ್ಕೃತಿಯ ಬಗ್ಗೆ ಇರುವ ವೈವಿಧ್ಯತೆಗಳ ಬಗ್ಗೆ ಇವತ್ತು ವಿಚಾರಗೋಷ್ಠಿಗಳನ್ನು ಮಾಡಿ ಅಭಿವೃದ್ಧಿಯ ಬಗ್ಗೆ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಬಗ್ಗೆಯೂ ಚರ್ಚಿಸಿದ್ದೇವೆ. ಇದೊಂದು ಶುಭ ಆರಂಭ ಅಂತ ನಾನು ಭಾವಿಸಿದ್ದು ಇನ್ನು ಹಲವಾರು ವಿಷಯಗಳ ಬಗ್ಗೆ ವಿಚಾರಗೋಷ್ಠಿಗಳನ್ನು ನಮ್ಮ ಸಂಘ ಸಂಸ್ಥೆಗಳು ಬೇರೆ ಬೇರೆ ಕಡೆ ಆಯೋಜಿಸಿದರೆ ತುಂಬಾ ಒಳ್ಳೆಯದು ಅಂತ ತಿಳಿದುಕೊಂಡಿದ್ದೇನೆ.
ನಮ್ಮ ಈ ಸಮಾವೇಶದ ಸಂಘಟನೆಯಲ್ಲಿ ಹೊಸ ಹೊಸ ನಾಯಕತ್ವ ಮುಂದೆ ಬಂದಿದೆ ಅಂತ ಹೇಳಲು ಇಚ್ಛೆ ಪಡುತ್ತೇನೆ ನಮ್ಮ ರಾಜ್ಯದ ಹಲವಾರು ಭಾಗದ,ಕೇರಳ ಕಾಸರಗೋಡಿನ ಜಿಲ್ಲಾ ತಾಲೂಕು ವಲಯ ಗ್ರಾಮ ಮಟ್ಟದಲ್ಲಿರುವ ಎಲ್ಲಾ ಸಂಘದ ಸದಸ್ಯರುಗಳು ಮುಕ್ತವಾಗಿ ಭಾಗವಹಿಸಿದ್ದು, ಸಂಘಟನೆ ಅನ್ನುವಂತದು ವಿಶೇಷ ಕಾರ್ಯವಾಗಿದ್ದು ಈ ಕಾರ್ಯದಲ್ಲಿ ನಮ್ಮ ಯುವಕರು, ಹಿರಿಯವರು ತುಂಬಾ ಹೃದಯದಿಂದ ಮನದಾಳದಿಂದ ಭಾಗವಹಿಸಿದ್ದಾರೆ ತಮ್ಮ ಪರಿಶ್ರಮದ ಬೆವರನ್ನು ಸುರಿಸಿದ್ದಾರೆ ಅವರಿಗೆಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸುತ್ತಿದ್ದೇನೆ.
ಇಂತಹ ಸಮಾವೇಶವನ್ನು ಪದೇ ಪದೇ ಮಾಡುವಂತಹ ಅವಶ್ಯಕತೆ ಇದೆ ಕನಿಷ್ಠ ಐದು ವರ್ಷಕ್ಕೊಮ್ಮೆಯಾದರೂ ಇಂತಹ ಸಮ್ಮೇಳನವನ್ನು ಬೇರೆ ಬೇರೆ ಕಡೆಯಲ್ಲಿ ಮಾಡಬೇಕು ಹಾಗೂ ಎಲ್ಲರಿಗೂ ಸಂಘಟನೆ ಆಯೋಜಕತ್ವದ ಅನುಭವ ಸಿಗಬೇಕೆಂದು ನಾನು ಆಶಿಸುತ್ತೇನೆ.
ನಮ್ಮ ಸಮಾವೇಶದ ಸಂಘಟನೆ ಮಾಡುವಂತಹ ಸಂದರ್ಭದಲ್ಲಿ ಹಲವಾರು ವಿಷಯಗಳ ಬಗ್ಗೆ ಅಭಿಪ್ರಾಯವನ್ನು ಹೊಂದಾಣಿಕೆ ಮಾಡುವಾಗ ಒಂದು ಒಳ್ಳೆಯ ಅನುಭವ ಸಿಕ್ಕಿದೆ ಅಂತ ನಾನು ಅಂದುಕೊಂಡಿದ್ದೇನೆ. ಸಮಾವೇಶದ ಸಂಘಟನೆಯ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಸರ್ವ ಸದಸ್ಯರುಗಳು Organizational ಸ್ಕಿಲ್ಸ್, Networking ಸ್ಕಿಲ್ಸ್ ಗಳನ್ನು ಮೈಗೂಡಿಸಿಕೊಂಡಿದ್ದಾರೆ ಅಂತ ಭಾವಿಸುತ್ತೇನೆ.
ನಮ್ಮ ಹಲವಾರು ತರದ ಆಚಾರ ವಿಚಾರ ಸಂಸ್ಕೃತಿ ನಂಬಿಕೆಗಳು ಇದ್ದರು ವಿವಿಧತೆಯಲ್ಲಿ ಏಕತೆ ಅನ್ನೋದು ಪ್ರಬುದ್ಧ ನಾಗರಿಕತೆಯಲ್ಲಿ ಕಾಣುವಹಾಗೆ ನಮ್ಮ ಮುಂದಿನ ಯುವ ಜನಾಂಗವು ವಿವಿಧತೆಯಲ್ಲಿ ಏಕತೆಯನ್ನು ಕಂಡುಗೊಂಡು ಎಲ್ಲರೂ ಸೇರಿಕೊಂಡು ಒಂದು ಬಲಿಷ್ಠ ಮರಾಟಿ ಜನಾಂಗವಾಗಿ ಅದನ್ನು ಮುಂದುವರಿಸುವಂತಹ ಜವಾಬ್ದಾರಿ ನಮ್ಮ ಮುಂದಿನ ಯುವ ಪೀಳಿಗೆಗೆ ಇದೆ.
ಈ ಸಮಾವೇಶದ ಯಶಸ್ಸಿಗೆ ಬೆವರು ಸುರಿಸಿದ ಸಮಾವೇಶದ ಗೌರವಾಧ್ಯಕ್ಷರಾದ ಡಾಕ್ಟರ್ ಸುಂದರ್ ನಾಯ್ಕ್ ಸೇರಿದಂತೆ ಸರ್ವರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ.
Address
No. 5-124(7), Near Suman Complex, Nagarakatte Road, Moodbidri, Dakshina Kannada dist. - 574227
karavalimaratisamavesha@gmail.com
Phone No
8217795523, 9482416077 9663440035, 9886558500